ಪಲ್ಲವಿ ಕುಡಿ ಕುಡಿತ ಚಟ್ಟ ಹತ್ತಿದಿ ಹೆಂಡತಿ ಮಕ್ಕಳನ್ನ ಸ್ಮಶಾನಕ ತಳ್ಳಿದಿ ಕುಡಿ ಕುಡಿತ ಚಟ್ಟ ಹತ್ತಿದಿ ಹೆಂಡತಿ ಮಕ್ಕಳನ್ನ ಸ್ಮಶಾನಕ ತಳ್ಳಿದಿ ಚರಣ ೧ ಬೆಳೆ ಬೆಳೆಯುತ್ತ ಏನು ನೋಡಿದಿ ಅದೇ ದಾರಿಯನ್ನ ತುಳಿದಿ ಇದೆಲ್ಲ ಮಜಾ ಅಂತ ತಿಳಕೊಂಡೆ ಯೌವ್ವನದಾಗ ಬೇಕು ಅಂತ ಅಂನ್ಕೊಂಡೆ ಕುಡಿ ಕುಡಿತ ಚಟ್ಟ ಹತ್ತಿದಿ ಹೆಂಡತಿ ಮಕ್ಕಳನ್ನ ಸ್ಮಶಾನಕ ತಳ್ಳಿದಿ ಚರಣ ೨ ಅವರಿವರು ಬಂದರಂತ ಓಡಿ ಹೋದೆ ಅವರಲ್ಲಿ ಬಾಟಲಿ ನೋಡಿ ಖುಷಿ ಪಟ್ಟೆ ಅಪ್ಪ ಅವ್ವನ ಕಣ್ಣಾಗ ಮಣ್ಣೆರಚಿದೆ ಬೇಕಾದಾಗ ಬಾಟಲಿ ಹಿಡಿದೆ ಕುಡಿ ಕುಡಿತ ಚಟ್ಟ ಹತ್ತಿದಿ ಹೆಂಡತಿ ಮಕ್ಕಳನ್ನ ಸ್ಮಶಾನಕ ತಳ್ಳಿದಿ ಚರಣ ೩ ಒಳ್ಳೆ ಮೈ ಕಟ್ಟು ಆಗ ನೀ ಜಾಣ ನೀರಿಲ್ಲದ ಪಡವಲು ಕಾಯಿ ಆದ್ಯೋ ಅಣ್ಣ ಕರಳು ಕೆಟ್ಟು ಹೋತು ಕುಡಿ ಕುಡಿತದಾಗ ದವಾಖಾನಿ ಬಾಗಲು ಕಾಯ್ತೈತಿ ನಿನ್ನನ ಕುಡಿ ಕುಡಿತ ಚಟ್ಟ ಹತ್ತಿದಿ ಹೆಂಡತಿ ಮಕ್ಕಳನ್ನ ಸ್ಮಶಾನಕ ತಳ್ಳಿದಿ ಚರಣ ೪ ಕಣ್ಣು ಕೆಂಪಾಗಿ ಕೈ ನಡುಗುತ್ತಾವ ಮನಿಯೊಳಗ ಮಕ್ಕಳು ಹಸಿದು ಅಳುತ್ತಾವ ಅವ್ವನ ಸೀರಿ ಅಡ ಇಟ್ಟು ಕುಡಿದೆ ಮನಿ ಮಾರಿ ಬಾಟಲಿ ತಂದೆ ಕುಡಿ ಕುಡಿತ ಚಟ್ಟ ಹತ್ತಿದಿ ಹೆಂಡತಿ ಮಕ್ಕಳನ್ನ ಸ್ಮಶಾನಕ ತಳ್ಳಿದಿ ಚರಣ ೫ ಇನ್ನಾದ್ರು ಎಚ್ಚರ ಆಗೋ ಬಾಟಲಿ ಬಿಟ್ಟು ಮನಿಕಡಿ ನಡಿಯೋ ಹೆಂಡತಿ ಮಕ್ಕಳು ಕಾಯ್ತಾರ ಹಾದಿ ನೋಡಿ ಹೊಸ ಬಾಳು ಕಟ್ಟಿಕೊ ಇನ್ನಾದ್ರು ಬೇಡಿ ಕುಡಿ ಕುಡಿತ ಚಟ್ಟ ಹತ್ತಿದಿ ಹೆಂಡತಿ ಮಕ್ಕಳನ್ನ ಸ್ಮಶಾನಕ ತಳ್ಳಿದಿ ಕುಡಿತದ ಚಟ ಬಿಡೋ ಅಣ್ಣ... ಮನಿಯ ಬೆಳಕ ಆರಿಸಬ್ಯಾಡ ಸುಮನ... ಅಪ್ಪ ಅವ್ವನ ಆಸಿ ನೆನಿ ಅಣ್ಣ... ಹೊಸ ಬೆಳಗು ಕಾಯ್ತೈತಿ ನಿನ್ನ ಕೂಡ... ಬದಲಾಗೋ... ಬದಲಾಗೋ... ಬದಲಾಗೋ... ಮಲ್ಲಯ್ಯನೊಳಗ ಒಂದಾಗೋ